ಕೊಡತಿಬೆಟ್ಟು 

	ಕೊಡತಿಬೆಟ್ಟು (ಹ್ಯಾಮರಟೋ) ಸಾಮಾನ್ಯವಾಗಿ ಕಾಲಿನ ಎರಡನೆಬೆರಳಿನಲ್ಲಿ ಕಂಡುಬರುವ ಅಂಗವಿಕಾರ. ಬೆರಳೆಲು ಕೀಲಿನಲ್ಲಿ ಕೆಳಬಾಗಿ ಬೆರಳತುದಿ ನೆಲಸವರುತ್ತದೆ.  ಹೀಗೆ ಬಾಗಿ ಕೊಡತಿ ಆಕಾರತಾಳುತ್ತದೆ.  ಪ್ರಧಾನವಾಗಿ ಬಾಗಿದ ಬೆರಳಿನ ಮೇಲ್ಬಾಗದಲ್ಲಿ ಒತ್ತುಗಂಟು ಅಥವಾ ಆಣೆ ಬೆಳೆದು ನೊವುಂಟು ಮಾಡುತ್ತದೆ.  ಈ ವಿಕಾರವು ಎರಡೂ ಕಾಲುಗಳಲ್ಲಿಯೂ ಮತ್ತು ಒಂದಕ್ಕಿಂತ ಹೆಚ್ಚು ಬೆರಳುಗಳಲ್ಲಿಯೂ ಕಾಣಿಸಿಕೊಳ್ಳ ಬಹುದು.  ಇದು ಸಂಜಾತವಾಗಿ ಅಥವಾ ಅನುವಂಶಿಕವಾಗಿಯೂ ಇರಬಹುದು.  ಬಿಗಿಯಾದ ಇಲ್ಲವೆ ಪಾದಗಳಿಗೆ ಹೊಂದಿಕೊಳ್ಳದ ಪಾದರಕ್ಷೆಗಳನ್ನು ಉಪಯೋಗಿಸವದರಿಂದಲೂ ಕೊಡತಿಬೆಟ್ಟಿನ ವಿಕಲತೆ ಮೂಡಬಹುದು.
	
ಎಳೆವಯಸ್ಸಿನಲ್ಲಿ ಚಿಕಿತ್ಸೆ ಸರಳ ಮತ್ತು ಫಲದಾಯಕ. ಬೆರಳನ್ನು ನೇರಗೊಳಿಸಿ ಬಾಗದಂತೆ ಪಟ್ಟಿ ಕಟ್ಟಿ ಸರಿಪಡಿಸಬಹುದು.  ವಯಸ್ಕರÀಲ್ಲಿ ಶಸ್ತ್ರ ಚಿಕಿತ್ಸೆ ಬೇಕಾಗುತ್ತದೆ. ಬೆರಳಿನ ಮೇಲೆ ಬೆಳೆದ ದಡ್ಡು ಅಥವಾ ಆಣಿ ಕೊಯ್ತೆಗೆದು ಬಾಗಿದ ಎಲುಬಿನ ಭಾಗಗಳನ್ನು ಮೊಟಕಗೊಳಿಸಿ ಬೆರಳನ್ನು ನೇರಗೊಳಿಸ ಬೇಕಾಗುತ್ತದೆ. ಮೊಟಕುಗೊಳಿಸಿದ ಮೂಳೆಗಳು ಸರಿಯಂತೆ ಒಳೆಲುತಂತಿ ಜೋಡಿಸಬೇಕಾಗುತ್ತದೆ.  ಇದರಿಂದ ನೋವಿಲ್ಲದ ಚಲನೆರಹಿತ ಬೆರಳು ಫಲಿಸುತ್ತದೆ.
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ